SUVARNA NEWS - SCIENCE EXPRESS TRAIN ARRIVES TO HUBLI... ಮಾಹಿತಿ ಮತ್ತು ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುವ ಸೈನ್ಸ್ ಎಕ್ಸ್ಪ್ರೆಸ್ ರೈಲು, ಹುಬ್ಬಳ್ಳಿಗೆ ಆಗಮಿಸಿದೆ. ವಿದ್ಯಾಥರ್ಿಗಳೆಲ್ಲಾ ರೈಲ್ವೆ ನಿಲ್ದಾಣದಲ್ಲಿ ಮುಗಿಬಿದ್ದು, ವಿಜ್ಞಾನ ಕ್ಷೇತ್ರದ ಕುತೂಹಲಗಳನ್ನು ವೀಕ್ಷಿಸುತ್ತಿದ್ದಾರೆ. 16 ಬೋಗಿಗಳ ರೈಲು, ಬಿಗ್ ಬ್ಯಾಂಗ್ ಸೇರಿದಂತೆ ಹಲವು ಆವಿಷ್ಕಾರಗಳ ವಿಷಯಗಳನ್ನು ಹೊತ್ತು ಬಂದಿದೆ. ಇಂಡೋ -ಜರ್ಮನ್ ಜಂಟಿ ಯೋಜನೆಯಡಿಯಲ್ಲಿ ಸಿದ್ಧಪಡಿಸಿರುವ ಈ ರೈಲು, ಎಲೆಕ್ಟ್ರಾನಿಕ್ಸ್, ಫೊಟೊನಿಕ್ಸ್ ಕುರಿತ ನ್ಯಾನೋ ಕಾಸ್ಮೋಸ್, ಜೀವಿಗಳ ವಿವಿಧ ಆಯಾಮಗಳ ಮಾಹಿತಿ, ಪರಿಸರ ರಕ್ಷಣೆ, ಹವಾಮಾನ ಬದಲಾವಣೆ, ನೀರು ಉಳಿತಾಯದಂಥ ಮಾಹಿತಿಗಳನ್ನು ಹೊತ್ತು ತಂದಿದೆ...